ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಮೈಸೂರು.

      

 

ಸಾಂಸ್ಥಿಕ ಉದ್ದೇಶ (ದೃಷ್ಟಿ)

                ಸಮಾಜಕ್ಕೆ ಸಂಶೋಧನಾಧಾರಿತ ಆಯುರ್ವೇದ ಚಿಕಿತ್ಸೆ, ಆರೋಗ್ಯ ರಕ್ಷಣೆಯ ಉಪಾಯಗಳು, ಗುಣಮಟ್ಟದ ಬೋಧನೆ, ಸಂಶೋಧನೆಗಳನ್ನು ಒದಗಿಸುವುದು.

ಸಾಂಸ್ಥಿಕ ಕಾರ್ಯಸೂಚಿ (ಸೃಷ್ಟಿ)

 1. ಆಯುಷ್ ಇಲಾಖೆಯ ಮಾರ್ಗ ಸೂಚಿಯಂತೆ ಸಂಸ್ಥೆಯಲ್ಲಿ ಗುಣಮಟ್ಟದ ಸೇವೆಯನ್ನು ಸಮಯಾನುಸಾರವಾಗಿ ನೀಡುವುದು.

 2. ಗುಣಮಟ್ಟದ ಔಷಧಗಳನ್ನು ಅವಶ್ಯಕತೆಯಿರುವವರಿಗೆ ಉಚಿತವಾಗಿ ನೀಡುವುದು.

 3. ಲಭ್ಯವಾಗುತ್ತಿರುವ ಸೇವೆಗಳನ್ನು ಓಂಃಊ ನಿಯಮಾವಳಿಗಳಿಗೆ ಅನುಸಾರವಾಗಿ ಉತ್ನತೀಕರಣಗೊಳಿಸುವುದಕ್ಕೆ ಪ್ರಯತ್ನಿಸುವುದು.

 4. ಎಲ್ಲ ಆಸ್ಪತ್ರೆಯ ಸೇವೆಗಳಾದ ಆಯುರ್ವೇದದ ತಜ್ಞತೆಯನ್ನಾಧರಿಸಿ ಪಂಚಕರ್ಮ, ಕ್ಷಾರಸೂತ್ರ, ಕೌಮಾರಭೃತ್ಯ ಮೊದಲಾದವುಗಳನ್ನು ಸೂಕ್ತ ರೀತಿಯಲ್ಲಿ ಒದಗಿಸುವುದು.

 5. ರೋಗಿಗಳ ಸಂಪೂರ್ಣ ಮಾಹಿತಿ-ಸೇವಾ ವಿವರಗಳನ್ನು ತಂತ್ರಜ್ಞಾನವನ್ನು ಆಧರಿಸಿ (e-hosಠಿiಣಚಿಟ soಜಿಣತಿಚಿಡಿe) ದಾಖಲಿಸುವುದು.

 6. ಗುಣಮಟ್ಟದ ಮಾನವ ಸೇವೆ, ತಾಂತ್ರಿಕ ಸೇವೆ, ಚಿಕಿತ್ಸಾ ಸೇವೆಗಳ ಮೂಲಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ನೇಹ ಮಯ ವಾತಾವರಣವನ್ನು ಕಲ್ಪಿಸಿಕೊಡುವುದು.

 7. ಭಾರತ ಸರ್ಕಾರ ಹಾಗೂ ISಔ 9000 ನಿಯಮಾವಳಿಗಳ ಪ್ರಕಾರ ಸಂಶೋಧನಾ ಅನುಕೂಲತೆಗಳನ್ನು ರೂಪಿಸುವುದು.

 8. ಮಾನವ ಸಂಪನ್ಮೂಲದ ಗುಣಮಟ್ಟವನ್ನು ಜ್ಞಾನ ಹಾಗೂ ತಾಂತ್ರಿಕತೆಯ ಮೂಲಕ ಹೆಚ್ಚಿಸಿ ತನ್ಮೂಲಕ ಗುಣಮಟ್ಟದ ಸಾಕಾರದ ಕನಸನ್ನು ನನಸಾಗಿಸುವುದು.

 9. ಅವಶ್ಯಕತೆಗೆ ಅನುಸಾರವಾಗಿ ವಿಶೇಷ ತಜ್ಞತೆ ಆಧರಿಸಿದ ಚಿಕಿತ್ಸೆಗಳನ್ನು ನೀಡುವುದು.

 10. ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ. ಅಧ್ಯಯನ ಆಕಾಂಕ್ಷಿಗಳಿಗೆ ಹಾಗೂ ಅಧ್ಯಯನ ನಿರತರಿಗೆ ಅವಶ್ಯಕವಾದ ಸಂಶೋಧನಾ ಪ್ರಯೋಗಾಲಯ, ಗ್ರಂಥಾಲಯ, ಆಸ್ಪತ್ರೆ, ವ್ಯವಸ್ಥೆಗಳನ್ನು ಒದಗಿಸುವುದು.

 11. ಅಸ್ತಿತ್ಪದಲ್ಲಿರುವ ಪಂಚಕರ್ಮ ಆಸ್ಪತ್ರೆ ಹಾಗೂ ಪಂಚಕರ್ಮ ಚಿಕಿತ್ಸಾ ಕ್ರಮವನ್ನು ಉತ್ನತೀಕರಣಗೊಳಿಸುವುದು. (ಓಂಃಊ ನಿಯಮಾವಳಿಗಳಿಗೆ ಅನುಸಾರವಾಗಿ)

 12. ಸಮಾಜದ ವಿವಿಧ ವರ್ಗಗಳ ಜನರ ಆರ್ಥಿಕ ಮಟ್ಟಕ್ಕೆ ಅನುಸಾರವಾಗಿ ಆಸ್ಪತ್ರೆಯ/ಸಂಸ್ಥೆಯ ಎಲ್ಲ ಸೇವೆಗಳೂ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು.

     ಆಸ್ಪತ್ರೆಯಲ್ಲಿ ರೋಗಿಗಳ ರೋಗಗಳಿಗೆ ಅನುಸಾರವಾಗಿ ಉಚಿತವಾಗಿ ಆಹಾರವನ್ನು ತಜ್ಞ ವೈದ್ಯರ ಮಾರ್ಗದರ್ಶನಕ್ಕೆ ಅನುಸಾರವಾಗಿ ನೀಡಲಾಗುತ್ತದೆ. ರೋಗಿಗಳಿಗೆ ಔಷಧಗಳು ಹಾಗೂ ವಿವಿಧ ಪಂಚಕರ್ಮಗಳನ್ನೂ ಉಚಿತವಾಗಿ ನೀಡಲಾಗುತ್ತದೆ. ಆಸ್ಪತ್ರೆಯ ಸಿಬ್ಬಂದಿಗಳಾದ ವೈದ್ಯರು, ದಾದಿಯರು, ಪರಿಚಾರಕರು, ಹಾಗೂ ಅನ್ಯ ಸಿಬ್ಬಂದಿ ವರ್ಗದವರೂ ಸಹ ಉತ್ತಮ ಸಾರ್ವಜನಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

      ಪ್ರಸ್ತುತ ಸಂಸ್ಥೆಯಲ್ಲಿ ನಾಲ್ಕು ಸ್ನಾತಕೋತ್ತರ ವಿಭಾಗಗಳಿವೆ. ಕಾಯಚಿಕಿತ್ಸಾ, ಆಯುರ್ವೇದ ಸಂಹಿತಾ ಸಿದ್ದಾಂತ, ಪಂಚಕರ್ಮ ಹಾಗೂ ಸ್ವಸ್ಥವೃತ್ತ ಎಂಬ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶವಿದೆ. ಕಾಯಚಿಕಿತ್ಸಾ  ವಿಭಾಗದಲ್ಲಿ 7 ಜನ, ಆಯುರ್ವೇದ ಸಂಹಿತಾ ಸಿದ್ದಾಂತ ವಿಭಾಗದಲ್ಲಿ 5 ಜನ, ಪಂಚಕರ್ಮ ವಿಭಾಗದಲ್ಲಿ 5 ಜನ ಹಾಗೂ ಸ್ವಸ್ಥವೃತ್ತ ವಿಭಾಗದಲ್ಲಿ 5 ಜನ ಪ್ರತಿ ವರ್ಷವೂ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಯನ್ಕಕೆ ಪ್ರವೇಶ ಪಡೆಯಬಹುದಾಗಿದೆ. ಅಲ್ಲದೇ ಕಾಯಚಿಕಿತ್ಸಾ ಹಾಗೂ ಆಯುರ್ವೇದ ಸಂಹಿತಾ ಸಿದ್ದಾಂತ ವಿಷಯಗಳಲ್ಲಿ ಪಿ.ಹೆಚ್.ಡಿ. ಅಧ್ಯಯನಕ್ಕೆ ಅವಕಾಶವಿದೆ.

 

                                ಪ್ರಾಚಾರ್ಯರ ನುಡಿ

 

                                                                                         

        ಸಂಸ್ಥೆಯ ಜಾಲತಾಣವನ್ನು ಪರಿಚಯಿಸಲು ಹಾಗೂ ಜಾಲತಾಣದ ಮೂಲಕ ಸಂಪರ್ಕಿಸಲು ಹೆಮ್ಮೆ ಎನಿಸುತ್ತದೆ. 110 ವರ್ಷಗಳಷ್ಟು ಪ್ರಾಚೀನವಾದ ಸಂಸ್ಥೆಯ ಪ್ರಾಚಾರ್ಯನಾಗಿ  ಕರ್ತವ್ಯ ನಿರ್ವಹಿಸುತ್ತಿರುವುದು ನನಗೆ ಅತ್ಯಂತ ಗೌರವದ ವಿಚಾರ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಮೈಸೂರು ಕೇವಲ ಉತ್ತಮ ಶಿಕ್ಷಣ ಸಂಸ್ಥೆಯಷ್ಟೇ ಅಲ್ಲ. ಇದು ಆಯುರ್ವೇದ ಕ್ಷೇತ್ರದ ಅತ್ಯುತ್ತಮ ಸೇವಾ ಕೇಂದ್ರವೂ ಹೌದು. ಸಂಸ್ಥೆಯು ಪರಿಣತಿ  ಹೊಂದಿರುವ ಅನುಭವಿ ಉತ್ಸಾಹ ಸಿಬ್ಬಂದಿ ವರ್ಗವನ್ನು ಹೊಂದಿದೆ. 20 ವರ್ಷಗಳಿಗಿಂತಲೂ ಹೆಚ್ಚಿನ ಬೋಧನಾ ಅನುಭವವಿರುವ ಬೋಧಕ ವರ್ಗ ಇಲ್ಲಿದೆ. ಎಲ್ಲ ಸಿಬ್ಬಂದಿ ವರ್ಗವೂ ಸಂಸ್ಥೆಯಲ್ಲಿನ ವಿವಿಧ ರೀತಿಯ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಮರ್ಥರಾಗಿದ್ದಾರೆ.

 ವಿದ್ಯಾರ್ಥಿಸ್ನೇಹಿ ಹಾಗೂ ಪ್ರೋತ್ಸಾಹದಾಯಕ ವಾತಾವರಣವು ಸಂಸ್ಥೆಯ ಈ ಯಶಸ್ಸಿನಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಉನ್ನತ ಶ್ರೇಣಿಯನ್ನು ಗಳಿಸುವಲ್ಲಿ ಹಾಗೂ ಅವರು ಆಯುರ್ವೇದವನ್ನೇ ಪ್ರಯೋಗಿಸುವಲ್ಲಿ ಈ ಅಂಶ ಮುಳ್ಯ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿಗಳು (ಸ್ನಾತಕ ಹಾಗೂ ಸ್ನಾತಕೋತ್ತರ) ವಿಶ್ವ ವಿದ್ಯಾಲಯದ ಪರೀಕ್ಷೆಗಳಲ್ಲಿ ಹಾಗೂ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳು, ವಿಚಾರ ಸಂಕಿರಣಗಳಲ್ಲಿ ಪಡೆಯುತ್ತಿರುವ ಉನ್ನತ ಶ್ರೇಣಿಗಳು- ಬಹುಮಾನಗಳು ಈ ಅಂಶಕ್ಕೆ ಸಾಕ್ಷಿಗಳಾಗಿವೆ. ಸಂಸ್ಥೆಯಲ್ಲಿ ಯಾವುದೇ ರೀತಿಯ ರ್ಯಾಗಿಂಗ್ ಕೂಡ ನಡೆಯುವುದಿಲ್ಲ. ಹೊಸದಾಗಿ ಸಂಸ್ಥೆಗೆ ಸೇರುವ ವಿದ್ಯಾರ್ಥಿಗಳನ್ನು ನಾನು ವೈಯಕ್ತಿಗವಾಗಿ ಮಾತನಾಡಿಸಿದಾಗ ಕೂಡ ವಿದ್ಯಾರ್ಥಿಗಳು ಸಂಸ್ಥೆಯ ವಾತಾವರಣವು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದು ಸಂತೋಷ ವ್ಯಕ್ತ ಪಡಿಸಿರುತ್ತಾರೆ. ಸಂಸ್ಥೆಯ ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯದ ಹಾಕಿ ಆಟಗಾರನಾಗಿದ್ದರೆ, ಮತ್ತೊಬ್ಬ ವಿದ್ಯಾರ್ಥಿ ಬಿಲ್ಲು ವಿದ್ಯೆಯ ಆಟಗಾರ ಇಬ್ಬರು ವಿದ್ಯಾರ್ಥಿಗಳೂ ಗಣರಾಜ್ಯೋತ್ಸವದ ಮೆರವಣಿಗೆಗೆ ಆಯ್ಕೆಯಾದವರು ಸಂಸ್ಥೆಯು ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ನಡೆಯುತ್ತಿದ್ದು, ಬೋಧನೆಗೆ ಬೇಕಾದ ಆಸ್ಪತ್ರೆ, ಗ್ರಂಥಾಲಯ, ಪ್ರಯೋಗಾಲಯ, ಸುಸಜ್ಜಿತ ತರಗತಿಗಳು- ಹೀಗೆ ಎಲ್ಲಾ ರೀತಿಯ ಅನುಕೂಲತೆಗಳನ್ನೂ ಹೊಂದಿದೆ. ಸಂಸ್ಥೆಯ ಗ್ರಂಥಾಲಯವು ಅತ್ಯುತ್ತಮ ಗ್ರಂಥಾಪಯವಾಗಿದ್ದು, 17440 ಹೆಚ್ಚು ಪ್ರಾಚ್ಯ0ನವ್ಯ ಶಾಸ್ರ್ರೀಯ ವೈದ್ಯಗ್ರಂಥಗಳನ್ನು ಹೊಂದಿದೆ. ಸಂಸ್ಥೆಯ ಕಟ್ಟಡ ಪುನರ್ನವೀಕರಣ ಹಾಗೂ ಅವಶ್ಯಕತೆಗಳನ್ನು ಪೂರೈಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ನಗರದಲ್ಲಿ ‘ವೈದ್ಯಕೀಯ ಸೇವೆ’ಯನ್ನು ನೀಡುವ ಸಂಸ್ಥೆಗಳಲ್ಲಿ ನಮ್ಮ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಸಂಸ್ಥೆಯ ಕಟ್ಟಡವೂ ಸಹ ಪಾರಂಪರಿಕ ಕಟ್ಟಡ ಎಂದು ಘೋಷಿಸಲ್ಪಟ್ಟಿದ್ದು, ನಗರದ ಕೇಂದ್ರ ಭಾಗದಲ್ಲಿದೆ ಸಂಸ್ಥೆಯ ಶತಮಾನೋತ್ಸವದ ಸಂದರ್ಭದಲ್ಲಿ ಸಂಸ್ಥೆಗಾಗಿ ಹೈಟೆಕ್ ಪಂಚಕರ್ಮ ಆಸ್ಪತ್ರೆಯು ಮಂಜೂರಾಯಿತು. ಒಟ್ಟು 128+40 ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆ ಹಾಗೂ ಸರ್ಕಾರಿ ಹೈಟೆಕ್ ಪಂಚಕರ್ಮ ಆಸ್ಪತ್ರೆ) 168 ಒಟ್ಟು ಒಳರೋಗಿಗಳ ಹಾಸಿಗೆಗಳು ಮೈಸೂರಿನಗೂ ನಗರದ ಸುತ್ತಮುತ್ತಲಿನ ಜನರ ಸೇವೆಗೆ ಲಭ್ಯವಿದೆ.

                                                

                                    ಆಡಳಿತ

ಶ್ರೀ ಶ್ರೀನಿವಾಸಲು,IFS (KN:1997)
ಆಯುಷ್ ಆಯುಕ್ತರು, ಕರ್ನಾಟಕ.

ಡಾ. ಬಿ.ಎಸ್. ಶ್ರೀಧರ್. ಎಂ.ಡಿ(ಆಯು)

ಆಯುಷ್‌ ಜಂಟಿ ನಿರ್ದೇಶಕ, ಕರ್ನಾಟಕ

 

       

                                         

ಡಾ. ಕೆ ಎಸ್ ರಾಧಾಕೃಷ್ಣ ರಾಮರಾವ್ ಎಂ.ಡಿ(ಆಯು)

ಪ್ರಿನ್ಸಿಪಾಲ್,

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು, ಮೈಸೂರು-01                     

 

          

                                                     ಅಫಿಲಿಯೇಶನ್

 

ಬೆಂಗಳೂರಿನ ಆರೋಗ್ಯ ವಿಜ್ಞಾನಗಳ ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಪೂರಕವಾಗಿದೆ

www.rguhs.ac.in

 

 

 

                                       ಸಾಂಸ್ಕøತಿಕ ನಗರ ಮೈಸೂರು

 

ಮೈಸೂರು ಅರಮನೆ

  

  

ಮೈಸೂರು ಅರಮನೆ ಒಂದು ಐತಿಹಾಸಿಕ ಅರಮನೆ ಮತ್ತು ಭಾರತೀಯ ರಾಜ್ಯ ಕರ್ನಾಟಕದ ಮೈಸೂರಿನಲ್ಲಿರುವ ರಾಜ ನಿವಾಸವಾಗಿದೆ. ಇದು ವಾಡೋಯರ್ ರಾಜವಂಶದ ಅಧಿಕೃತ ನಿವಾಸ ಮತ್ತು ಮೈಸೂರು ಸಾಮ್ರಾಜ್ಯದ ಸ್ಥಾನವಾಗಿದೆ. ಈ ಅರಮನೆಯು ಮೈಸೂರಿನ ಮಧ್ಯಭಾಗದಲ್ಲಿದೆ ಮತ್ತು ಪೂರ್ವಕ್ಕೆ ಚಾಮುಂಡಿ ಬೆಟ್ಟಗಳನ್ನು ಎದುರಿಸುತ್ತಿದೆ. ಮೈಸೂರನ್ನು ಸಾಮಾನ್ಯವಾಗಿ 'ಅರಮನೆಗಳ ನಗರ' ಎಂದು ವಿವರಿಸಲಾಗುತ್ತದೆ, ಮತ್ತು ಇದು ಸೇರಿದಂತೆ ಏಳು ಅರಮನೆಗಳಿವೆ; ಆದಾಗ್ಯೂ, 'ಮೈಸೂರು ಅರಮನೆ' ನಿರ್ದಿಷ್ಟವಾಗಿ ಹಳೆಯ ಕೋಟೆಯೊಳಗೆ ಇದನ್ನು ಉಲ್ಲೇಖಿಸುತ್ತದೆ

 ಚಾಮುಂಡಿ ಬೆಟ್ಟ

        

 

ಚಾಮುಂಡೇಶ್ವರಿ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಭಾರತದ ಕರ್ನಾಟಕ ರಾಜ್ಯದ ಅರಮನೆ ನಗರ ಮೈಸೂರಿನಿಂದ 13 ಕಿ.ಮೀ ದೂರದಲ್ಲಿ ಚಾಮುಂಡಿ ಬೆಟ್ಟಗಳ ತುದಿಯಲ್ಲಿದೆ. ಮೂಲ ದೇವಾಲಯವನ್ನು 12 ನೇ ಶತಮಾನದಲ್ಲಿ ಹೊಯ್ಸಳ ದೊರೆಗಳು ನಿರ್ಮಿಸಿದ್ದಾರೆಂದು ಭಾವಿಸಿದರೆ, ಅದರ ಗೋಪುರವನ್ನು ಬಹುಶಃ 17 ನೇ ಶತಮಾನದ ವಿಜಯನಗರ ಆಡಳಿತಗಾರರು ನಿರ್ಮಿಸಿದ್ದಾರೆ. 1659 ರಲ್ಲಿ, ಬೆಟ್ಟದ 3000 ಅಡಿಗಳ ಶಿಖರದವರೆಗೆ ಒಂದು ಸಾವಿರ ಮೆಟ್ಟಿಲುಗಳ ಹಾರಾಟವನ್ನು ನಿರ್ಮಿಸಲಾಯಿತು. ಚಾಮುಂಡೇಶ್ವರಿ ದೇವಾಲಯವನ್ನು ಶಕ್ತಿ ಪೀಠವೆಂದು ಪರಿಗಣಿಸಲಾಗಿದೆ ಮತ್ತು 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ಪ್ರದೇಶವನ್ನು ಪುರಾಣ ಕಾಲದಲ್ಲಿ ಕ್ರೌಂಚಾ ಪುರಿ ಎಂದು ಕರೆಯಲಾಗಿದ್ದರಿಂದ ಇದನ್ನು ಕ್ರೌಂಚ ಪಿಥಾ ಎಂದು ಕರೆಯಲಾಗುತ್ತದೆ. ಸತಿ ದೇವಿಯ ಕೂದಲು ಇಲ್ಲಿ ಬಿದ್ದಿದೆ ಎನ್ನಲಾಗಿದೆ.

ಇತ್ತೀಚಿನ ನವೀಕರಣ​ : 09-01-2024 10:21 PM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080