ಅಭಿಪ್ರಾಯ / ಸಲಹೆಗಳು

DEPARTMENT OF PRASUTI TANTRA AND STRIROGA

ಪ್ರಸೂತಿ ತಂತ್ರ ವಿಭಾಗ

                             

ದೃಷ್ಟಿ

ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ಆಯುರ್ವೇದದ ಮಹತ್ವದ ಶಾಖೆಯಾಗಿದ್ದು, ಗರ್ಭಧಾರಣೆಯ ಹೆರಿಗೆ ಮತ್ತು ಸ್ತ್ರೀರೋಗ ಅಸ್ವಸ್ಥತೆಗಳನ್ನು ನಿಭಾಯಿಸುತ್ತದೆ

  • ಪ್ರಸೂತಿ ತಂತ್ರ ವಿಷಯವು ಗರ್ಭಿಣಿ ಪರಿಚರ್ಯ, ಪ್ರಸವ ಪೂರ್ವ, ಪ್ರಸವೋತ್ತರ ಹಾಗೂ ಬಾಣಂತಿ ಪರಿಚರ್ಯ, ಬಾಣಂತನದ ರೋಗಗಳ ನಿರ್ಣಯ, ರೋಗ ಪತ್ತೆ ಹಾಗೂ ಚಿಕಿತ್ಸೆಗಳ ಬಗ್ಗೆ ವ್ಯವಹರಿಸುತ್ತದೆ.
  • ಸ್ತ್ರೀ ರೋಗ ಶಾಸ್ತ್ರವು ಸ್ತ್ರೀ ಸಂಬಂಧಿ ಕಾಯಿಲೆಗಳನ್ನು ಆಯುರ್ವೇದ ಪದ್ದತಿಯ ಮೂಲಕ ನಿರ್ವಹಣೆ ಹಾಗೂ ಉತ್ತಮ ಸಂತಾನೋತ್ಪತ್ತಿಯ ನಿರ್ವಹಣೆ ಬಗ್ಗೆ ವ್ಯವಹರಿಸುತ್ತದೆ.

ಉದ್ದೇಶಗಳು

ವೈದ್ಯಕೀಯ:     ü ಎಲ್ಲಾ ವಯಸ್ಸಿನ ಮಹಿಳೆಯರಿಗೆ ಆರೋಗ್ಯದ ಅರಿವು ಮೂಡಿಸುವುದು.ü ಸಮುದಾಯದ ಅಗತ್ಯಗಳ ಮೇಲೆ ಉತ್ಕೃಷ್ಟ ಮಟ್ಟದ ಸಂಶೋಧನೆ ನಡೆಸುವುದು.ü ಮಹಿಳಾ ಸಮುದಾಯವನ್ನು ರೋಗಮುಕ್ತವಾಗಿಸುವುದು.ü ದಂಪತಿಗಳಿಗೆ ಆರೋಗ್ಯಕರ  ಮಗು ಪಡೆಯಲು ಗರ್ಭ ಸಂಸ್ಕಾರ ವಿಧಿಯನ್ನು ಕೈಗೊಳ್ಳುವುದು.
    

ಶೈಕ್ಷಣಿಕ:

  • ಪ್ರತಿಯೊಬ್ಬ ವಿದ್ಯಾರ್ಥಿಗೆ ಆಯುರ್ವೇದ ಕ್ಷೇತ್ರದ ವಿವಿಧ ಪರಿಕಲ್ಪನೆಗಳ ಬಗ್ಗೆ ಅರಿವು ಮೂಡಿಸಿ, ಸಮಾಜಕ್ಕೆ ಉತ್ತಮ ವೈದ್ಯ ಸಮೂಹವನ್ನು ಒದಗಿಸುವುದು.

 

ಗುರಿಗಳು :-

  1. ಪಂಚಕರ್ಮ ಶೋಧನ ಚಿಕಿತ್ಸೆಯನ್ನು, ವಿಶೇಷವಾಗಿ ”ಉತ್ತರ ಬಸ್ತಿ” ಚಿಕಿತ್ಸೆಯನ್ನು ನೀಡಿ , “ಗರ್ಭಾದಾನ ವಿಧಿ” ಕೈಗೊಳ್ಳುವುದು.
  2. ಗರ್ಭ ಸ್ಥಾಪನ ವಿಧಿಯನ್ನು ವಿವಿಧ ಪದ್ದತಿಗಳ ಮೂಲಕ ನೆರವೇರಿಸುವುದು.
  3. ಗರ್ಭಾವಸ್ಥೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಮಗುವಿನ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಲು “ಗರ್ಭ ರಸಾಯನ” ಚಿಕಿತ್ಸೆ ನೀಡುವುದು
  4. ಪ್ರಸೂತಿ ಮತ್ತು ಸ್ತ್ರೀ ರೋಗ ಸಂಬಂಧಿಸಿದ ವಿವಿಧ ಚಿಕಿತ್ಸಾ ಉಪಕ್ರಮಗಳಲ್ಲಿ (ಉದಾ. ಯೋನಿ ಪ್ರಕ್ಷಾಲನ, ಯೋನಿ ಪಿಚು, ಯೋನಿ ಧೂಪನ, ಉತ್ತರ ಬಸ್ತಿ ) ಪ್ರಮಾಣಿತ ಶಸ್ತ್ರಕರ್ಮ ವಿಧಿಯನ್ನು ಕಾರ್ಯಗತಗೊಳಿಸುವುದು.
  5. ವಿವಿಧ ಸ್ತ್ರೀ ಸಂಬಧಿ ರೋಗಗಳಿಗೆ ಆಯುರ್ವೇದದಲ್ಲಿ ಚಿಕಿತ್ಸಾ ವಿಧಾನಗಳನ್ನು ಅನ್ವೇಷಿಸುವುದು
  6. ರಜೋನಿವೃತ್ತಿ ಹೊಂದುತ್ತಿರುವ ಮಹಿಳೆಯರಿಗೆ ಪ್ರತ್ಯೇಕವಾಗಿ ಮೆನೋಪಾಸ್ ಕ್ಲಿನಿಕ್ ಸ್ಥಾಪಿಸುವುದು ಹಾಗೂ ಇವರುಗಳಿಗೆ ನಿತ್ಯ ರಸಾಯನ ಹಾಗೂ ಪ್ರೌಢ ರಸಾಯನಗಳನ್ನು ಒದಗಿಸುವುದು.
  7. ಪ್ರಸವೋತ್ತರ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು.
  8. ವಂಧ್ಯತ್ವ (ಬಂಜೆತನ), ಕ್ಯಾನ್ಸರ್ ಪ್ರಕರಣಗಳ ಪತ್ತೆಗೋಗಿ ಪ್ರಯೋಗಾಲದ ಪರೀಕ್ಷೆ ಗಳು ಹಾಗೂ ಚಿಕಿತ್ಸಾ ಸೌಲಭ್ಯ ವನ್ನು ಒದಗಿಸುವುದು.
  9. ಸ್ತ್ರೀಯರಲ್ಲಿ.ಕಂಡು ಬರುವ ಮುಟ್ಟಿನ ವಿಕಾರಗಳು ಹಾಗೂ ಯೋನಿ ವ್ಯಾಪತ್ ಗಳಿಗೆ ಚಿಕಿತ್ಸೆ ಒದಗಿಸುವುದು.
  10. ಬಂಜೆತನ ಇರುವ ದಂಪತಿಗಳಿಗೆ ಕೌನ್ಸೆಲಿಂಗ್ ಹಾಗೂ ಚಿಕಿತ್ಸೆ ನೀಡುವುದು.

ಶೈಕ್ಷಣಿಕ:

  1. ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ಪರಿಣಾಮಕಾರಿಯಾಗಿರುವ ಸ್ನಾತಕಪೂರ್ವ ತರಬೇತಿ ಗಳನ್ನು ನೀಡಿ ಸ್ನಾತಕೋತ್ತರ. ಕಲಿಕೆಗೆ ಸಿದ್ಧರಾಗಿಸುವುದು.
  2. ಸ್ನಾತಕಪೂರ್ವ ವಿದ್ಯಾರ್ಥಿಗಳಲ್ಲಿ ವೈದ್ಯಕೀಯ ಕಾರ್ಯ ವಿಧಾನಗಳಿಗೆ ಅತೀ ಹೆಚ್ಚು ಮಾನ್ಯತೆ ನೀಡುವುದು.

 

 

  • ಲಭ್ಯವಿರುವ ಸೇವೆಗಳು

:-

ವೈದ್ಯಕೀಯ

  • ಹೊರರೋಗಿ ವಿಭಾಗ
  • ಸಾಮಾನ್ಯ ಹೊರ ರೋಗಿ ವಿಭಾಗದಲ್ಲಿ ಎಲ್ಲಾ ತರಹದ ಸ್ತ್ರೀ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು.
  • ಗರ್ಭಿಣಿಯರ ಪ್ರಸವಪೂರ್ವ ಆರೈಕೆಗಾಗಿ ಪ್ರತ್ಯೇಕ ಹೊರರೋಗಿ ವಿಭಾಗದಲ್ಲಿ ವಿಶೇಷ ಗಮನದೊಂದಿಗೆ ಮಾಸಾನುಮಾಸಿಕ ಪರಿಚರ್ಯ ನಡೆಸಲಾಗುತ್ತದೆ.
  • ಪ್ರಸವೋತ್ತರ ಸೇವೆಗಳು ಹಾಗೂ ವಾಡಿಕೆಯಂತೆ ನಡೆಸುತ್ತಿರುವ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ರಜೋನಿವೃತ್ತಿಯ ( ಮುಟ್ಟು ನಿಲ್ಲುವ ಸಮಯ) ಬಗ್ಗೆ ಸಲಹೆ (ಕೌನ್ಸೆಲಿಂಗ್) ನೀಡಲಾಗುತ್ತದೆ.

  • ಒಳ ರೋಗಿ ವಿಭಾಗ :
  • ವಿಶೇಷ ಚಿಕಿತ್ಸೆ ಅಗತ್ಯ ವಿರುವ ಸ್ತ್ರೀ ರೋಗಗಳಿಗೆ ಒಳರೋಗಿ ವಿಭಾಗಕ್ಕೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುವುದು.
  • ದೈನಂದಿನ ಆಧಾರದಲ್ಲಿ ಸ್ಥಾನಿಕ ಚಿಕಿತ್ಸೆ ಮತ್ತು ಪಂಚಕರ್ಮ ಚಿಕಿತ್ಸೆ ಗಳನ್ನು ಒದಗಿಸಲಾಗುತ್ತದೆ.

ಶೈಕ್ಷಣಿಕ :

  • ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಉತ್ತಮ ತರಬೇತಿ ಹಾಗೂ ಅನುಭವ ಹೊಂದಿರುವ ಸಿಬ್ಬಂದಿ ವರ್ಗ ಲಭ್ಯವಿರುತ್ತದೆ.
  • ಪರಿಣಾಮಕಾರಿ ಬೋಧನೆಗಾಗಿ ವಿಚಾರಗೋಷ್ಠಿ, ವೆಬಿನಾರ್ ಮತ್ತು ಪಿ.ಪಿ.ಟಿ ತರಬೇತಿ ಗಳನ್ನು ನಡೆಸಲಾಗುತ್ತದೆ.
  • ಉತ್ತಮ ಅವಧಿಯ ಪ್ರಾಯೋಗಿಕ ತರಬೇತಿ ಗಳನ್ನು ನೀಡಲಾಗುತ್ತದೆ.
  • ಇತರೆ ಅಲೋಪತಿ ಆಸ್ಪತ್ರೆಗಳಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗ ತರಬೇತಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

 

 

 

 

 

 

 

ಇತ್ತೀಚಿನ ನವೀಕರಣ​ : 25-02-2021 01:12 PM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080