ಅಭಿಪ್ರಾಯ / ಸಲಹೆಗಳು

KAYACHIKITSA

ಕಾಯಚಿಕಿತ್ಸಾ ವಿಭಾಗ

 

 

ದೃಷ್ಟಿ :

 

ಉತ್ತಮವಾದ ಚಿಕಿತ್ಸಾ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯವನ್ನು ಒದಗಿಸುವುದು.

 

 

ಉದ್ದೇಶಗಳು :

 

ಜನಸಾಮನ್ಯರಲ್ಲಿ ಆಯುರ್ವೇದದ ವಿಷಯಗಳ ಬಗ್ಗೆ ಜಾಗರೂಕತೆಯನ್ನು ಮೂಡಿಸುವುದು.

ಉತ್ತಮವಾದ ಹಾಗೂ ಗುಣಮಟ್ಟದ ಶಿಕ್ಷಣವನ್ನು ಪಠ್ಯ ಹಾಗೂ ಪ್ರಾಯೋಗಿಕವಾಗಿ ಒದಗಿಸಿ,

ಕಾಯಚಿಕಿತ್ಸಾ ವಿಷಯದಲ್ಲಿ ಆಯುರ್ವೇದ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದು.

ಸಂಶೋಧನಾ ಆಧಾರಿತ ಆಯುರ್ವೇದ ಚಿಕಿತ್ಸಾ ಕ್ರಮವನ್ನು ದಿನನಿತ್ಯ ಅಳವಡಿಸಿಕೊಳ್ಳುವುದರ ಮೂಲಕ ಆಯುರ್ವೇದ ವೈದ್ಯರಲ್ಲಿ ವಿಶ್ವಾಸವನ್ನು ಹೆಚ್ಚಿಸುವುದು.

 

ಲಭ್ಯವಿರುವ ಸೌಲಭ್ಯಗಳು:

 

ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು.

 

ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು :

 

ನಾನಾತರಹದ ಚರ್ಮರೋಗಗಳಾದ ಇಸುಬು, ತೊನ್ನು, ಸೋರಿಯಾಸಿಸ್, ಹುಳುಕಡ್ದಿ ಮುಂತಾದ ತೊಂದರೆಗಳಿಗೆ ಶೋಧನ ಹಾಗೂ ಶಮನ ಕ್ರಮಗಳನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತದೆ.

 

ಆಯುರ್ವೇದದ ಮುಖಾಂತರ ಸೌಂದರ್ಯ ಸಂಬಂಧಿತ ತೊಂದರೆಗಳಿಗೆ ಉತ್ತಮವಾದ ಸಲಹೆ ಮತ್ತು ಪರಿಹಾರಗಳನ್ನು ಒದಗಿಸಲಾಗುತ್ತದೆ.

 

ಪಕ್ಷಾಘಾತ (ಪಾರ್ಶ್ವ ವಾಯು), ಬಾಹುಶೂಲ ಮುಂತಾದ ನರಸಂಬಂಧಿ ಖಾಯಿಲೆಗಳಿಗೆ ಸಂಶೋಧನಾ ಆಧಾರಿತ ಚಿಕಿತ್ಸೆ ನೀಡಲಾಗುತ್ತದೆ.

 

ವಿವಿಧ ಮಾನಸಿಕ ಸಮಸ್ಯೆಗಳಿಗೆ ಉತ್ತಮವಾದ ಸಮಾಲೋಚನೆ/ ವೈದ್ಯಕೀಯ ಸಲಹೆ ಮತ್ತು ಪರಿಹಾರ ಒದಗಿಸಲಾಗುತ್ತದೆ.

ಶರೀರದ ನಾನಾಭಾಗದ ದೀರ್ಘಕಾಲೀನ ರೋಗಗಳಿಗೆ ವಿಶಿಷ್ಟವಾದ ರಸಾಯನ ಚಿಕಿತ್ಸೆಯನ್ನು ನೀಡಲಾಗುತ್ತದೆ.

 

ವೈದ್ಯಕೀಯ ಕ್ಷೇತ್ರದಲ್ಲಿನ ಸವಾಲುಗಳಾದಂತಹ ಕ್ಯಾನ್ಸರ್, ಎಚ್. ಐ.ವಿ. ,ಕ್ಷಯ ರೋಗ (ಟಿ. ಬಿ), ಮುಪ್ಪಿನ ರೋಗ, ನ್ಯೂರೋಪಥಿ ಮತ್ತು ಜೀವನಶೈಲಿಯ ಅಸಮತೋಲನದಿಂದ ಬರುವ ಸಮಸ್ಯೆಗಳಾದಂತಹ ಬೊಜ್ಜು, ಸಕ್ಕರೆ ಖಾಯಿಲೆ, ಥೈರಾಯಿಡ್ ಸಮಸ್ಯೆಗಳಿಗೆ ಸಂಸ್ಥೆಯ ವಿಭಾಗದಲ್ಲಿ ನಡೆದ ಹಾಗೂ ನಡೆಯುತ್ತಿರುವ ಸಂಶೋಧನಾ ಆಧಾರಿತ ಉತ್ತಮ ಗುಣಮಟ್ತದ ಚಿಕಿತ್ಸೆ ಒದಗಿಸಲಾಗುತ್ತದೆ.

 

ಕಾಯಚಿಕಿತ್ಸಾ ವಿಭಾಗದ ಕುರಿತು :

 

 ಕಾಯಚಿಕಿತ್ಸಾ ವಿಭಾಗವು ಪ್ರಾಚೀನ, ಪ್ರಶಂಸಿತ ಸ್ನಾತಕೋತ್ತರ ವಿಭಾಗವಾಗಿದ್ದು ೧೯೭೧ ರಿಂದ ಯಶಸ್ವಿಯಾಗಿ ಸೇವೆಯನ್ನು ಒದಗಿಸುತ್ತಾ ಬಂದಿದೆ.

ಪ್ರತಿ ವರ್ಷವೂ ಕಾಯಚಿಕಿತ್ಸಾ ವಿಭಾಗಕ್ಕೆ ೭ ಸ್ನಾತಕೋತ್ತರ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಾರೆ.ಈ ವಿದ್ಯಾಭ್ಯಾಸವು ೩ ವರ್ಷದ್ದಾಗಿದ್ದು, ಈ ಅವಧಿಯಲ್ಲಿವಿದ್ಯಾರ್ಥಿಗಳು ಕಾಯಚಿಕಿತ್ಸಾ ಪಠ್ಯ ಹಾಗೂ ಪ್ರಾಯೋಗಿಕ ವಿಷಯದಲ್ಲಿ ಸಂಪೂರ್ಣ ಪರಿಣತಿಯನ್ನು ಹೊಂದುತ್ತಾರೆ.

 PG ACTIVITES LINK:

https://pgkayachikitsamysuru.blogspot.com/ 

ಇತ್ತೀಚಿನ ನವೀಕರಣ​ : 01-09-2021 12:01 PM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080